Thursday, July 29, 2010

ನಿಂಗೂ ಅನ್ಸುತ್ತಲ್ವ....?

ಹೇ ಕೋತಿ ಏನೇ ನೀನು ಎಷ್ಟೊತ್ತೂ ನಾನ್ ನಿನ್ನ ಮೊದಲಿನ ಹಾಗೆ ಮಾತಾಡಿಸ್ತಿಲ್ಲ, ಮೆಸೇಜ್ ಮಾಡ್ತಿಲ್ಲಾ, ನಿನ್ನ ದೂರ ಮಾಡಿದೀನಿ, ನಾನ್ ಮೊದಲಿನ ಹಾಗಿಲ್ಲ ಅಂತ ನನ್ನೇ ಬೈತಿದೀಯ, ಸರೀನಪ್ಪ ನಾನೇನೋ ದೂರಾಗಿದ್ದೀನಿ, ಮಾತಾಡಿಸ್ತಿಲ್ಲ, ಅದಕ್ಕೆ ನೀನು ಸುಮ್ನಿದ್ ಬಿಡೋದ, ನಿಂಗೇನೆ ಆಗಿತ್ತು ನನ್ನ ಮಾತಾಡ್ಸೋಕೆ, ನೀನ್ ಮಾತಾಡಿಸದೇ ಇದ್ರೆ ನಾನೇನ್ ಖುಷಿಯಾಗಿರ್ತೀನಿ ಅನ್ಕೊಂಡ್ಯ, ನಾನೂ ಮನುಷ್ಯಾನೆ, ನನಗೂ ನೋವಾಗುತ್ತೆ, ನನಗೂ ಭಾವನೆಗಳಿವೆ ಕಣೆ, ನನ್ ಮೊಬೈಲ್ ಗೆ ಒಂದ್ ಮೆಸೇಜ್ ಬಂದ್ರು ಅದು ನಿಂದೆನೇನೋ ಅಂತ ಎಷ್ಟ್ ಆತುರದಿಂದ inbox ನೋಡ್ದಾಗ, ಅದು ನಿಂದಲ್ಲ ಅಂತ ಗೊತ್ತಾದ್ಮೇಲೆ ನಂಗೆಷ್ಟು ಬೇಸರ ಆಗುತ್ತೆ ಅನ್ನೋದನ್ನ ನಿಂಗೆ ಯಾವ್ ರೀತಿ ಅರ್ಥ ಮಾಡಿಸ್ಲಿ ಹೇಳು....ಏನೋ ನಿನಗೊಬ್ಬಳಿಗೆ ಮನಸು ಅಂತ ಇರೋದು ಅನ್ನೋ ಹಾಗೆ ಆಡ್ತೀಯ, ಸಾಕ್ ಸುಮ್ನಿರೆ, ನಾನೂ ನಿನ್ನ ತುಂಬಾ miss ಮಾಡ್ಕೊತಿದೀನ್ ಗೊತ್ತಾ, ಎಷ್ಟು ಬೇಗ ನೀನ್ ನನ್ನ ಮಾತಾಡಿಸ್ತಿಯೋ ಅನ್ನೋದನ್ನೇ ನಾನ್ ಎದುರ್ ನೋಡ್ತಿದೀನೆ ಚಿನ್ನು

ಹೇ ಗೆಳೆಯಾ ನೀನೂ ಕೂಡ ನನ್ ಬಗ್ಗೆ ಹೀಗೆಲ್ಲ ಯೋಚ್ನೆ ಮಾಡ್ತಿರ್ತೀಯ ಅಲ್ವ..
ನಿಜ ಕಣೋ ನಾನೇ ನಿನ್ನ ಮಾತಾಡ್ಸೋಣ ಅಂತ ತುಂಬಾ ಸಲ ಅನ್ಕೊಳ್ತೀನಿ, ಆದ್ರೆ ನಾನ್ ಮಾತಾಡಿಸ್ದಾಗ ನೀನೆಲ್ಲಿ ನಿರ್ಲಿಪ್ತನಾಗಿರ್ತೀಯೋ ಅನ್ನೋ ಭಯ ಕೂಡ ನನ್ನಲ್ಲಿದೆ ಕಣೋ...

ಏನೇ ಆಗ್ಲಿ ನನ್ನ ಹೃದಯ ನನ್ನ ಹೃದಯ ಟುವ್ವಿ ಟುವ್ವಿ ಅನ್ನೋ ಸಮಯ.....
ಏಳು ಜನ್ಮಕು ಏಳೇಳು ಜನ್ಮಕೂ ನೀನೆ ನನ್ನ ಪ್ರೀತಿ ಗೆಳೆಯಾ.....

2 comments:

  1. ಚಿಕ್ಕದಾಗಿ ಚೊಕ್ಕದಾಗಿ ಮನಸ್ಸಿನ ಮಾತುಗಳನ್ನ ಚನ್ನಾಗಿ ಬರ್ದಿದಿರಾ ನಿಮ್ಮ ಬರವನೆಗೆಯಲ್ಲಿ ಪ್ರೀತಿಯ ಕಾತುರತೆ, ವ್ಯಕ್ತ ಪಡಿಸ ಬಯಸುವ ಆ ಮಾತುಗಳು ಸೊಗಸಾಗಿವೆ...!

    ReplyDelete