Thursday, July 29, 2010

ನಿಂಗೂ ಅನ್ಸುತ್ತಲ್ವ....?

ಹೇ ಕೋತಿ ಏನೇ ನೀನು ಎಷ್ಟೊತ್ತೂ ನಾನ್ ನಿನ್ನ ಮೊದಲಿನ ಹಾಗೆ ಮಾತಾಡಿಸ್ತಿಲ್ಲ, ಮೆಸೇಜ್ ಮಾಡ್ತಿಲ್ಲಾ, ನಿನ್ನ ದೂರ ಮಾಡಿದೀನಿ, ನಾನ್ ಮೊದಲಿನ ಹಾಗಿಲ್ಲ ಅಂತ ನನ್ನೇ ಬೈತಿದೀಯ, ಸರೀನಪ್ಪ ನಾನೇನೋ ದೂರಾಗಿದ್ದೀನಿ, ಮಾತಾಡಿಸ್ತಿಲ್ಲ, ಅದಕ್ಕೆ ನೀನು ಸುಮ್ನಿದ್ ಬಿಡೋದ, ನಿಂಗೇನೆ ಆಗಿತ್ತು ನನ್ನ ಮಾತಾಡ್ಸೋಕೆ, ನೀನ್ ಮಾತಾಡಿಸದೇ ಇದ್ರೆ ನಾನೇನ್ ಖುಷಿಯಾಗಿರ್ತೀನಿ ಅನ್ಕೊಂಡ್ಯ, ನಾನೂ ಮನುಷ್ಯಾನೆ, ನನಗೂ ನೋವಾಗುತ್ತೆ, ನನಗೂ ಭಾವನೆಗಳಿವೆ ಕಣೆ, ನನ್ ಮೊಬೈಲ್ ಗೆ ಒಂದ್ ಮೆಸೇಜ್ ಬಂದ್ರು ಅದು ನಿಂದೆನೇನೋ ಅಂತ ಎಷ್ಟ್ ಆತುರದಿಂದ inbox ನೋಡ್ದಾಗ, ಅದು ನಿಂದಲ್ಲ ಅಂತ ಗೊತ್ತಾದ್ಮೇಲೆ ನಂಗೆಷ್ಟು ಬೇಸರ ಆಗುತ್ತೆ ಅನ್ನೋದನ್ನ ನಿಂಗೆ ಯಾವ್ ರೀತಿ ಅರ್ಥ ಮಾಡಿಸ್ಲಿ ಹೇಳು....ಏನೋ ನಿನಗೊಬ್ಬಳಿಗೆ ಮನಸು ಅಂತ ಇರೋದು ಅನ್ನೋ ಹಾಗೆ ಆಡ್ತೀಯ, ಸಾಕ್ ಸುಮ್ನಿರೆ, ನಾನೂ ನಿನ್ನ ತುಂಬಾ miss ಮಾಡ್ಕೊತಿದೀನ್ ಗೊತ್ತಾ, ಎಷ್ಟು ಬೇಗ ನೀನ್ ನನ್ನ ಮಾತಾಡಿಸ್ತಿಯೋ ಅನ್ನೋದನ್ನೇ ನಾನ್ ಎದುರ್ ನೋಡ್ತಿದೀನೆ ಚಿನ್ನು

ಹೇ ಗೆಳೆಯಾ ನೀನೂ ಕೂಡ ನನ್ ಬಗ್ಗೆ ಹೀಗೆಲ್ಲ ಯೋಚ್ನೆ ಮಾಡ್ತಿರ್ತೀಯ ಅಲ್ವ..
ನಿಜ ಕಣೋ ನಾನೇ ನಿನ್ನ ಮಾತಾಡ್ಸೋಣ ಅಂತ ತುಂಬಾ ಸಲ ಅನ್ಕೊಳ್ತೀನಿ, ಆದ್ರೆ ನಾನ್ ಮಾತಾಡಿಸ್ದಾಗ ನೀನೆಲ್ಲಿ ನಿರ್ಲಿಪ್ತನಾಗಿರ್ತೀಯೋ ಅನ್ನೋ ಭಯ ಕೂಡ ನನ್ನಲ್ಲಿದೆ ಕಣೋ...

ಏನೇ ಆಗ್ಲಿ ನನ್ನ ಹೃದಯ ನನ್ನ ಹೃದಯ ಟುವ್ವಿ ಟುವ್ವಿ ಅನ್ನೋ ಸಮಯ.....
ಏಳು ಜನ್ಮಕು ಏಳೇಳು ಜನ್ಮಕೂ ನೀನೆ ನನ್ನ ಪ್ರೀತಿ ಗೆಳೆಯಾ.....

Thursday, July 22, 2010

ನಿನ್ ಪ್ರೀತಿಗಾಗಿ ಕೈ ಚಾಚುವೆ...

ಹೇ ಪುಟ್ಟ ನೀನಂದ್ರೆ ನಂಗೆ ತುಂಬಾ ಇಷ್ಟ, ತುಂಬಾ ಪ್ರೀತಿ ಕಣೋ, ನೀನೆ ನನ್ನುಸಿರು, ನಿನ್ ನೆನಪೇ ನಂಗೆ ಚೈತನ್ಯದ ಚಿಲುಮೆ, at the same time ನೀನ್ ನನ್ನಿಂದ ದೂರಾಗಿದ್ದೀಯ ಅನ್ನೋ ಕೊರಗು ಕೂಡ.. ಯಾಕೋ ಹಾಗ್ ನಗ್ತೀಯ.. ನನ್ ಮಾತಲ್ಲಿ ನಂಬ್ಕೆ ಇಲ್ವಾ.. ನಿಜ ಹೇಳ್ತಿದೀನೋ.. ಪ್ರಾಮಿಸ್.. ನನ್ ಮೇಲಾಣೆ ಸರೀನಾ..

          ನನ್ ಜೀವನದಲ್ಲಿ ಈ ಪ್ರೀತಿ ಅನ್ನೋದು ತುಂಬಾನೇ ವಿಚಿತ್ರ ಕಣೋ, ಮರೀಚಿಕೆ ಹಾಗೆ.. ಪ್ರೀತೀನ ನಾನಾಗಿ ಬಯಸದೆ ಹೋದರು ಅದು ತಾನಾಗೆ ನನ್ನ ಹುಡುಕ್ಕೊಂಡು ಬಂದಿರುತ್ತೆ, ಆ ಪ್ರೀತಿ ಅನ್ನೋ ಸಾಗರದಲ್ಲಿ ನನ್ನ ಪೂರಾ ಮುಳುಗಿಸಿ, ನಾನಿನ್ನೇನು ಆ ಪ್ರೀತೀನ ಬಿಟ್ಟು ಬದುಕಿರ್ಲಾರೆ ಅನ್ನೋ ಹೊತ್ಗೆ ನನ್ನನ್ನ ಒಂಟಿಯಾಗಿ ಮಾಡಿ ದೂರ ಹೊರಟೋಗುತ್ತೆ. ನಂತ್ರ ಆ ಸಿಗ್ದೆ ಇರೋ ಪ್ರೀತಿಗಾಗಿ ಹುಡುಕೋದೇ ಆಗೋಗುತ್ತೆ ಕಣೋ..

          ಹೇ ಚಿನ್ನು ಇದನ್ನೆಲ್ಲಾ ನಿಂಗ್ಯಾಕ್ ಹೇಳ್ತಿದೀನಿ ಅಂತ ಯೋಚ್ನೆ ಮಾಡ್ತಿದೀಯ, ಆ ಚಿಂತೆ ನಿನಗ್ ಬೇಡ, ನಾನೇ ಹೇಳ್ತೀನಿ. ಈಗ ನಾನ್ ಕೂಡ ನಿನ್ ಪ್ರಿತಿಗಾಗಿ ಹುಡುಕ್ತಾ ಅಲೆದಾಡ್ತಿದೀನ್ ಕಣೋ. ನಾನ್ ನಿನಗ್ ತುಂಬಾ ಹತ್ರದಲ್ಲೇ ಇದೀನಿ ಅನ್ಸುತ್ತೆ, ಆದ್ರೆ ಅದ್ಯಾವ್ ಮಾಯದಲ್ಲೋ ತುಂಬಾ ದೂರ ಹೊರಟೋಗಿರ್ತೀಯ ಗೊತ್ತಾಗೋದೆ ಇಲ್ಲ, ಆದ್ರು ನನ್ ಮನಸಿನಲ್ಲಿ ಎಲ್ಲೋ ಒಂದು ಕಡೆ ಪುಟ್ಟ ಆಶೆ ಇದೆ ಕಣೋ ನೀನ್ ನನಗ್ ಸಿಕ್ತೀಯ ಅಂತ. ಅದಕ್ಕಾಗೆ ಈ ಅಲೆದಾಟ, ಹುಡುಕಾಟ ಎಲ್ಲಾ.

          ನೀನ್ ನನಗ್ ಸಿಕ್ದಾಗ ನಾನ್ ನಿನ್ಮುಂದೆ ಮೊಣಕಾಲೂರಿ ನಿನಗಾಗಿ, ನಿನ್ ಪ್ರೀತಿಗಾಗಿ ಕೈ ಚಾಚಿ ಬೇಡ್ಕೊಳ್ತೀನ್  ಕಣೋ.... ನಿನ್ ಪ್ರೀತೀನ ನಂಜೊತೆ ಹಂಚ್ಕೊಳ್ತಿಯೋ ಅಥವಾ ನನ್ನ ನೋಡೀನು ನೋಡದೇ ಇರೋವ್ರ ಹಾಗೆ ಹೊರಟೋಗ್ತೀಯೋ ನಿನ್ನಿಷ್ಟ.. ಆದ್ರೆ ನಿನ್ ಪ್ರೀತಿ ನನಗ್ ಸಿಗ್ಲಿಲ್ಲ ಅನ್ನೋ ನೋವು ನನ್ ಮನ್ಸಲ್ಲಿ ಸದಾ ಇದ್ದೆ ಇರುತ್ತೆ ಜೊತೆಗೆ ಕಣ್ಣೀರ್ ಕೂಡ...

Thursday, July 1, 2010

ಹೇ ಹುಡುಗ..

ಮನಸ್ಸಿನಲ್ಲಿ ಪ್ರೀತಿ ಇದ್ರೆ ಕಣ್ಣಲ್ಲಿ ಕೋಪವಿರುತ್ತೆ...
ಮುಖದಲ್ಲಿ ಮೌನ ಇದ್ರೆ ಎದೆಯಲ್ಲಿ ಆಸೆ ಇರುತ್ತೆ...
ಮಾತಿನಲ್ಲಿ ದ್ವೇಷ ಇದ್ರೆ ಉಸಿರಿನಲ್ಲಿ ನಿನ್ನ ಹೆಸರಿರುತ್ತೆ...
ನೀನು ಎಂದೆಂದು ನನ್ನವನಾಗಿದ್ರೆ ಈ ಬಾಳು ಚೆಂದವೆನಿಸುತ್ತೆ...
ನೀನು ನನ್ನ ಹತ್ರ ಇದ್ರೆ ಪ್ರಪಂಚವೇ ಬೇಡವೆನಿಸುತ್ತೆ...
ನನ್ನ ಜೊತೆ ನೀನಿಲ್ಲದ ಬಾಳು ಬೇಡವೆನಿಸುತ್ತೆ...