Thursday, July 22, 2010

ನಿನ್ ಪ್ರೀತಿಗಾಗಿ ಕೈ ಚಾಚುವೆ...

ಹೇ ಪುಟ್ಟ ನೀನಂದ್ರೆ ನಂಗೆ ತುಂಬಾ ಇಷ್ಟ, ತುಂಬಾ ಪ್ರೀತಿ ಕಣೋ, ನೀನೆ ನನ್ನುಸಿರು, ನಿನ್ ನೆನಪೇ ನಂಗೆ ಚೈತನ್ಯದ ಚಿಲುಮೆ, at the same time ನೀನ್ ನನ್ನಿಂದ ದೂರಾಗಿದ್ದೀಯ ಅನ್ನೋ ಕೊರಗು ಕೂಡ.. ಯಾಕೋ ಹಾಗ್ ನಗ್ತೀಯ.. ನನ್ ಮಾತಲ್ಲಿ ನಂಬ್ಕೆ ಇಲ್ವಾ.. ನಿಜ ಹೇಳ್ತಿದೀನೋ.. ಪ್ರಾಮಿಸ್.. ನನ್ ಮೇಲಾಣೆ ಸರೀನಾ..

          ನನ್ ಜೀವನದಲ್ಲಿ ಈ ಪ್ರೀತಿ ಅನ್ನೋದು ತುಂಬಾನೇ ವಿಚಿತ್ರ ಕಣೋ, ಮರೀಚಿಕೆ ಹಾಗೆ.. ಪ್ರೀತೀನ ನಾನಾಗಿ ಬಯಸದೆ ಹೋದರು ಅದು ತಾನಾಗೆ ನನ್ನ ಹುಡುಕ್ಕೊಂಡು ಬಂದಿರುತ್ತೆ, ಆ ಪ್ರೀತಿ ಅನ್ನೋ ಸಾಗರದಲ್ಲಿ ನನ್ನ ಪೂರಾ ಮುಳುಗಿಸಿ, ನಾನಿನ್ನೇನು ಆ ಪ್ರೀತೀನ ಬಿಟ್ಟು ಬದುಕಿರ್ಲಾರೆ ಅನ್ನೋ ಹೊತ್ಗೆ ನನ್ನನ್ನ ಒಂಟಿಯಾಗಿ ಮಾಡಿ ದೂರ ಹೊರಟೋಗುತ್ತೆ. ನಂತ್ರ ಆ ಸಿಗ್ದೆ ಇರೋ ಪ್ರೀತಿಗಾಗಿ ಹುಡುಕೋದೇ ಆಗೋಗುತ್ತೆ ಕಣೋ..

          ಹೇ ಚಿನ್ನು ಇದನ್ನೆಲ್ಲಾ ನಿಂಗ್ಯಾಕ್ ಹೇಳ್ತಿದೀನಿ ಅಂತ ಯೋಚ್ನೆ ಮಾಡ್ತಿದೀಯ, ಆ ಚಿಂತೆ ನಿನಗ್ ಬೇಡ, ನಾನೇ ಹೇಳ್ತೀನಿ. ಈಗ ನಾನ್ ಕೂಡ ನಿನ್ ಪ್ರಿತಿಗಾಗಿ ಹುಡುಕ್ತಾ ಅಲೆದಾಡ್ತಿದೀನ್ ಕಣೋ. ನಾನ್ ನಿನಗ್ ತುಂಬಾ ಹತ್ರದಲ್ಲೇ ಇದೀನಿ ಅನ್ಸುತ್ತೆ, ಆದ್ರೆ ಅದ್ಯಾವ್ ಮಾಯದಲ್ಲೋ ತುಂಬಾ ದೂರ ಹೊರಟೋಗಿರ್ತೀಯ ಗೊತ್ತಾಗೋದೆ ಇಲ್ಲ, ಆದ್ರು ನನ್ ಮನಸಿನಲ್ಲಿ ಎಲ್ಲೋ ಒಂದು ಕಡೆ ಪುಟ್ಟ ಆಶೆ ಇದೆ ಕಣೋ ನೀನ್ ನನಗ್ ಸಿಕ್ತೀಯ ಅಂತ. ಅದಕ್ಕಾಗೆ ಈ ಅಲೆದಾಟ, ಹುಡುಕಾಟ ಎಲ್ಲಾ.

          ನೀನ್ ನನಗ್ ಸಿಕ್ದಾಗ ನಾನ್ ನಿನ್ಮುಂದೆ ಮೊಣಕಾಲೂರಿ ನಿನಗಾಗಿ, ನಿನ್ ಪ್ರೀತಿಗಾಗಿ ಕೈ ಚಾಚಿ ಬೇಡ್ಕೊಳ್ತೀನ್  ಕಣೋ.... ನಿನ್ ಪ್ರೀತೀನ ನಂಜೊತೆ ಹಂಚ್ಕೊಳ್ತಿಯೋ ಅಥವಾ ನನ್ನ ನೋಡೀನು ನೋಡದೇ ಇರೋವ್ರ ಹಾಗೆ ಹೊರಟೋಗ್ತೀಯೋ ನಿನ್ನಿಷ್ಟ.. ಆದ್ರೆ ನಿನ್ ಪ್ರೀತಿ ನನಗ್ ಸಿಗ್ಲಿಲ್ಲ ಅನ್ನೋ ನೋವು ನನ್ ಮನ್ಸಲ್ಲಿ ಸದಾ ಇದ್ದೆ ಇರುತ್ತೆ ಜೊತೆಗೆ ಕಣ್ಣೀರ್ ಕೂಡ...

11 comments:

 1. hmmm simply superb

  Raj
  rjgouda@gmail.com

  ReplyDelete
 2. olleya baraha adakke oppuva chtra !!!! very good.

  ReplyDelete
 3. ತುಂಬಾ ಧನ್ಯವಾದಗಳು ರಾಜ್ ರವರೆ..

  ReplyDelete
 4. ತುಂಬಾ ಧನ್ಯವಾದಗಳು ಬಾಲು ಸರ್..

  ReplyDelete
 5. ಉಷಾ ರವರೇ
  ಕೈ ಚಾಚಿದ ಪ್ರೀತಿಯ ಭಾವ ಚೆನ್ನಾಗಿ ಮೂಡಿ ಬಂದಿದೆ

  ReplyDelete
 6. ತುಂಬಾ ಧನ್ಯವಾದಗಳು ಸರ್..

  ReplyDelete
 7. ತುಂಬಾ ಚೆನ್ನಾಗಿದೆ

  ReplyDelete
 8. ಕೈ ಚಾಚಿ ಬೇಡುವ ಪ್ರೀತಿಗೆ ಕೈ ಹಿಡಿದು ಜೊತೆ ನಡೆವ ಪ್ರೀತಿ ಎಲ್ಲರಿಗೂ ಸಿಗಲಿ . ಬರಹ ಚನ್ನಾಗಿದೆ..!

  ReplyDelete
 9. ನೀವು ತುಂಬಾ ಚನ್ನಾಗಿ ಬರೀತಿರಾ ಕಣ್ರಿ, ಅದರಲ್ಲಿ ಉಪಯೋಗಿಸಿದಿರಲ್ಲಾ ಆ ಫೋಟೋ ತುಂಬಾ ಚನ್ನಾಗಿದೆ.

  ReplyDelete