Monday, June 28, 2010

ಪ್ರೀತಿ

ಕಣ್ಣುಗಳಿಗೆ ಕಾಣಿಸದ ಪ್ರೀತಿ...
ಮಾತುಗಳಿಗೆ ಸಿಲುಕದ ಪ್ರೀತಿ...
ಕಾಡುತಿರುವೆ ಏಕೆ ಈ ರೀತಿ ...
ಮನಸು-ಹೃದಯಗಳಿಗೆ ಕೊಟ್ಟು ಅನುಭೂತಿ...!!

ನನ್ ನೆನಪು ಬರೋದಿಲ್ವ...?

ನನ್ನ ನೆಚ್ಚಿನ ಗೆಳೆಯನೆ,


ನನ್ನ ನಿನ್ನ ಸ್ನೇಹವಾದದ್ದು ಆಕಸ್ಮಿಕ. ಸ್ನೇಹವಾದ ಕೆಲವೇ ದಿನಗಳಲ್ಲಿ ನೀನು ನನಗೆ ಅದೆಷ್ಟು ಆತ್ಮಿಯನಾಗ್ಬಿಟ್ಟೆ. ನಿನ್ನೆಲ್ಲ ಭಾವನೆಗಳನ್ನ ಮರೆಮಾಚದೆ ನನ್ ಹತ್ರ ಹಂಚ್ಕೊಳ್ತಿದ್ದೆ. ಒಂದು ಕ್ಷಣ ಸಮಯ ಸಿಕ್ಕಿದ್ರು ನನ್ನ ಮಾತಾಡ್ಸ್ತಿದ್ದೆ, ಎಷ್ಟೊಂದ್ ಸಲ ರೇಗಿಸ್ತಿದ್ದೆ, ನಿನ್ನ ಕೀಟ್ಲೆ ಮಾತ್ಗಳಿಂದ ನಾನ್ ಕೋಪಿಸ್ಕೊಳ್ಳುವ ಹಾಗೆ ಮಾಡ್ತಿದ್ದೆ. ನಾನ್ ಕೋಪಿಸ್ಕೊಂಡಾಗ ಸಮಾಧಾನ ಕೂಡ ಮಾಡ್ತಿದ್ದೆ, ಆಗೆಲ್ಲ ನನಗೆಷ್ಟು ಖುಷಿ ಆಗ್ತಿತ್ತು ಗೊತ್ತಾ, ನೀನು ಕೋಪಿಸ್ಕೊಳೋದು ನನಗಿಷ್ಟ ಆಗುತ್ತೆ ಕಣೆ ಅಂತ ನನ್ ಕೋಪಾನ್ ಕೂಡ ಮೆಚ್ಕೊಳ್ತಿದ್ದೆ....


ಆದ್ರೆ ಈಗ ಏನಾಯ್ತೋ ಗೆಳೆಯ ಆ ಮಾತ್ಗಳು, ಆ ತುಂಟಾಟಗಳು, ಯಾಕೆ ಮೌನವಾಗಿದೀಯ, ಎಲ್ಲಾನು ಇಷ್ಟ್ ಬೇಗ ಮರ್ತುಬಿಟ್ಟಿದ್ದಿಯೇನೋ..... ಈ ನಿನ್ನ ಮೌನಾನ ನನ್ನಿಂದ ಸಹಿಸೋಕಾಗ್ತಿಲ್ಲ ಕಣೋ,.. ಪದೇ ಪದೇ ನೆನಪಿಗ್ ಬರ್ತಿದ್ದೀಯ ಗೊತ್ತಾ, ನನಗ್ಯಾವ ಕೆಲ್ಸದಲ್ಲೂ ಮನಸ್ಸಿಲ್ಲವಾಗಿದೆ, ಮನಸ್ಸಿಗೆ ಏನೋ ಕಳ್ಕೊಂಡಿರೋ ಫೀಲಿಂಗ್, ನೀನಿಲ್ದೆ ನಾನು ಒಂಟಿ ಅನ್ನೋ ಭಾವನೆ, ಹೃದಯದಲ್ಲೇನೋ ತಳಮಳ... ನೀನು ನನ್ನಿಂದ ದೂರವಾಗಿದ್ದೀಯ ಅನ್ನೋ ದುಃಖಾನ ನನ್ನಿಂದ ತಡ್ಕೊಳೋಕಾಗ್ತಿಲ್ಲ ಕಣೋ.... ನಿನ್ನ ನೆನಪಾದಾಗಲೆಲ್ಲ ಸದಾ ಕಣ್ಣಂಚಲ್ಲೇ ನಿಂತಿರೋ ಕಣ್ಣೀರು... ಇಲ್ಲ ಕಣೋ ಗೆಳೆಯ ನನ್ನಿಂದ ಸಾಧ್ಯ ಆಗ್ತಿಲ್ಲ... ಈ ನೋವನ್ನ ಭರಿಸೋಂತ ಶಕ್ತಿ ನನಗಿಲ್ವೋ....

ಎಲ್ಲೇ ಇರಲಿ ಹಗಲು ಇರುಳು ನಿನ್ನ ನೆನಪೇ ಕಾಡೈತೆ....
ಸೇರೋ ದಾರಿ ಕಾಣದೆ ಹೋಗಿ ಮನಸು ಅಳುತ ನೊಂದೈತೆ....

ಹೇಳು ಗೆಳೆಯ ನನ್ನ ಮಾತಾಡಿಸ್ಬೇಕು ಅಂತ ನಿನಗೆ ಒಂದು ಸಲಾನು ಅನ್ನಿಸ್ಲಿಲ್ವಾ....?
ನನಗ್ ಸದಾ ನಿನ್ ನೆನಪು ಬರೋ ಹಾಗೆ ನಿಂಗೂ ನನ್ ನೆನಪು ಬರೋದಿಲ್ವ.....?

ಜೀವ ನೀನು ದೇಹ ನಾನು...

ಹೇ ಗೆಳೆಯಾ


ನಾನ್ ನಿನ್ ನೆನಪಲ್ಲಿ ಇಲ್ವಲ್ಲ, ತುಂಬಾ ದಿನಗಳಾದ್ರೂ ನೀನ್ ನನ್ನ ಮಾತಾಡಿಸ್ಲೆ ಇಲ್ವಲ್ಲ ಅಂತ ಕೊರಗ್ತಿದ್ದವ್ಳಿಗೆ ಅಮೃತ ಸಿಕ್ಕಿದಷ್ಟು ಖುಷಿಯಾಯ್ತು ಕಣೋ,ಯಾಕೆ ಗೊತ್ತಾ ಕಡೆಗೂ ಇವತ್ ನಿನ್ ನೆನಪಿಗೆ ಬಂದು ನನ್ನ ಮಾತಾಡಿಸ್ಬೇಕು ಅನ್ನೋ ಮನಸು ಇಷ್ಟ್ ದಿನಗಳಾದ್ಮೇಲಾದ್ರೂ ನಿನಗ್ ಬಂತಲ್ಲ ಅಂತ. ಪರವಾಗಿಲ್ಲ ಕಣೋ ಗೆಳೆಯಾ ಸ್ವಲ್ಪ ದಿನ ನನ್ ಮನ್ಸಿಗೆ ನೋವಾದ್ರೂ, ಇನ್ನೂ ನಿನ್ ನೆನಪಲ್ಲಿ ಇದೀನಲ್ಲ ಅನ್ನೋ ಭಾವನೇನೆ ನನ್ ಮನ್ಸಿಗೆ ಸ್ವಲ್ಪಸಮಾಧಾನ ತಂದಿದೆ.....


ಇಷ್ಟ್ ದಿನ ನೀನ್ ನನ್ನಿಂದ ದೂರ ಇದ್ಯಲ್ಲ ಅದಕ್ಕೆ ನಿನ್ಮೇಲೆ ತುಂಬಾ ಕೋಪ ಬಂದಿದೆ ಕಣೋ, ಆ ಕೋಪಕ್ಕೆ ನಿನ್ನನ್ನ ಚೆನಾಗ್ ಹೊಡಿಬೇಕು ಅನ್ನಿಸ್ತಿದೆ ಗೊತ್ತಾ, ಅನ್ಸೋದಲ್ಲ ನಿನ್ನ ಹೊಡೆಯೋವರ್ಗು ನನ್ ಮನ್ಸಿಗೆ ಪೂರ್ತಿ ಸಮಾಧಾನ ಅಗೊದಿಲ್ವೋ...

ಹೌದು ಕಣೋ, ನಿನ್ ಕೊರಳ್ ಪಟ್ಟಿ ಹಿಡಿದು ನಿನ್ನ ಚೆನ್ನಾಗ್ ಹೊಡೆದು ಆಮೇಲೆ ನಿನ್ನೆದೆಮೇಲೆ ಒರಗಿ ನಿನ್ನ ಗಟ್ಟಿಯಾಗಿ ಅಪ್ಕೊಂಡು ಇನ್ಮೇಲೆ ನನ್ನ ನಿನ್ನಿಂದ ದೂರ ಮಾಡ್ಬೇಡ ಅಂತ ಅಳ್ಬೇಕು ಅನ್ನಿಸ್ತಿದೆ ಕಣೋ.....


ಜೀವ ನೀನು ದೇಹ ನಾನು ನೀನು ದೂರವಾದರೆ ಇರಲಾರೆನು...

ನಿನ್ನ ಮನವ ಬಲ್ಲೆನು, ನಿನ್ನ ಒಲವ ಬಲ್ಲೆನು, ಎಂದಿಗೂ ನಿನ್ನಲೇ ಬೆರೆತೆನು...

ನಿನ್ನೊಂದಿಗೆ ಮೊದಲ ಹೆಜ್ಜೆ...ಮೊದಲ ನೋಟ ಬೆರೆತ ಕ್ಷಣ.....

ಹೇ ಗೆಳೆಯಾ ನನ್ನ ಹೃದಯದ ಬಡಿತವೇ ನೀನು ಕಣೋ.. ಎಷ್ಟೊಂದು ದಿನಗಳು ನಾನು ನೀನು ಮಾತಾಡ್ಕೊಂಡಿದ್ರು ಅಂದಿನವರೆಗೂ ಯಾವತ್ತು ನಾವಿಬ್ರು ಮುಖತಃ ಭೇಟಿಯಾಗಿರ್ಲೆ ಇಲ್ಲ... ಆದ್ರೆ ನಾವಿಬ್ರು ಭೇಟಿಯಾಗೋ ಆ ಕ್ಷಣ ಬಂದೇಬಿಡ್ತು.... ಆ ದಿನ ನಾವಿಬ್ರು ಮೊದಲ ಬಾರಿಗೆ ಭೇಟಿಯಾದ ದಿನ.... ಈಗ್ಲೂ ನನ್ ನೆನಪಲ್ಲಿದೆ...


ಅಂದು ಬೆಳಿಗ್ಗೆ ಬೇಗ ಎದ್ದು ಎಲ್ಲ ಕೆಲಸಗಳನ್ನೂ ಚಕ ಚಕ ಮುಗಿಸಿ ನಿನ್ನ ಯಾವಾಗ್ಯಾವಾಗ ನೋಡ್ತೀನೋ ಅಂತ ಎಷ್ಟ್ ಕಾತರದಲ್ಲಿದ್ದೆ ಗೊತ್ತಾ.... ಮನಸ್ ತುಂಬಾ ನೀನೆ ತುಂಬ್ಕೊಂಡಿದ್ದೆ ಕಣೋ....


ಕಡೆಗೂ ನಿನ್ನ ನೋಡೋ ಆ ಸುಸಮಯ ಬಂತು. ನಿನ್ನ ನೋಡಿದ ಆ ಕ್ಷಣ ನನ್ನಲ್ಲಿ ಏನೋ ರೋಮಾಂಚನ ಕಣೋ... ಅದೇ ಗುಂಗಿನಲ್ಲಿ ನಿನ್ನ ಮಾತಾಡಿಸಲಿಕ್ಕೆ ಏನೂ ತೋಚ್ಲೇ ಇಲ್ವೋ... ನಿನ್ ಹತ್ರ ಫೋನಲ್ಲಿ, ಮೆಸೇಜ್ ನಲ್ಲಿ ತುಂಬಾ ಸಲಿಗೆಯಿಂದ ಮಾತಾಡ್ತಿದ್ ನನಗೆ ನಿನ್ ಮುದ್ದು ಮುಖ ನೋಡಿ ಮಾತೇ ಮರೆತುಹೋಯ್ತು ಕಣೋ.. ನಿಂಜೊತೆ ತುಂಬಾ ಹೊತ್ತು ಕಳೆದ್ರು, ಕಾಲ ಸರಿದಿದ್ದೇ ಗೊತ್ತಾಗ್ಲಿಲ್ವೋ, ಯಾಕ್ ಅಷ್ಟ್ ಬೇಗ ಸಮಯ ಕಳೀತೋ ಅನ್ನೋ ಬೇಜಾರಿಂದ್ಲೆ ಇಷ್ಟವಿಲ್ದೆ ಇರೋ ಮನಸ್ಸಿನಿಂದಲೇ ನಿನ್ನಿಂದ ದೂರಾಗಿ ಭಾರವಾದ ಹೃದಯದಿಂದ ಮನೆ ಕಡೆ ಹೆಜ್ಜೆ ಹಾಕಿದ್ದಾಯ್ತು ಗೊತ್ತೆನೋ....


ಹೇ ಗೆಳೆಯಾ ಅಂದು ನಾನ್ ನಿಂಜೊತೆ ಮಾತಾಡದೆ ಇರಬಹುದು, ಆದ್ರೆ ಆ ಕ್ಷಣ ನನ್ ಕಣ್ಗಳಂತೂ ನಿನ್ನ ಕಣ್ಗಳ ಜೊತೆ ಮಾತಾಡಿದ್ದು ನಿಜ ಕಣೋ...


ಕಣ್ಣು ಕಣ್ಣು ಕಲೆತಾಗ ಮನಸು ಉಯ್ಯಾಲೆ ಆಗಿದೆ ತೂಗಿ...

ಹೃದಯ ಬಿಡಲಾರೆ ಎಂದಿದೆ ಕೂಗಿ...


How FRIENDSHIP breaks.....!!!???

How FRIENDSHIP breaks?

Both Friends will think, the other is BUSY...

And will not contact
Thinking
It may be DISTURBING...

After that each will think..
why i should contact FIRST...?


Here your FRIENDSHIP will be converted to HATE...

Finally without contact the memory becomes WEAK...

THEY FORGET EACH OTHER....!!!